ಆಚಾರ್ಯ ಶ್ರೀ ವಿದ್ಯಾಸಾಗ ಮಹಾರಾಜ ವಿರಚಿತ...!
ಮೂಕ-ಮಾಟಿ ಮಹಾ ಕಾವ್ಯ!
ಖಂಡ-೪!
ಅಗ್ನಿಯ ಪರೀಕ್ಷೆ!
ಬೆಳ್ಳಿಯಂಥ ಭಸ್ಮ!!
ಪು .ಸಂ. (389-390)
ಪ್ರಭಾತ ಕಾಲದ ಮಾತು! ಒಬ್ಬರಿಗಿಂತೊಬ್ಬರು ಅನುಭವಿ, ಚಿಕಿತ್ಸಾ- ವಿದ್ಯಾ- ವಿಶಾರದರು ವಿಶ್ವ ವಿಖ್ಯಾತ ವೈದ್ಯರು ಶ್ರೇಷ್ಠಿಯ ಚಿಕಿತ್ಸೆಗಾಗಿ ಆಗಮಿಸಿರುವರು.......!
ಸಕಲ ವೈದ್ಯರೂ ತಮ್ಮ ತಮ್ಮ ವಿಧಾನಗಳಿಂದ ಶ್ರೇಷ್ಠಿಯ ತಪಾಸಣೆ ಮಾಡಿದರು!
ತಡೆ-ತಡೆದು ಅರ್ಧ ಮೂರ್ಚಿತವಾದಂತೆ ಅವಸ್ಥೆಯಾಗುತ್ತಿದೆ,
ನಿದ್ರಾವಸ್ಥೆಯಲ್ಲಿರುವಂತೆ ಶರೀರದ ಚಲನವಲನವಾಗಿದೆ!
ಆದರೆ ಮಾತಿನ ಚಟುವಟಿಕೆ ಮಾತ್ರ ಇಲ್ಲದಿರುವಂತಿದೆ!
ಕ್ರಮವಾಗಿ ಎಲ್ಲರೂ ತಮ್ಮ ತಮ್ಮ ನಿರ್ಣಯ ತಳೆದರು .. ಎಲ್ಲರ ಅಭಿಮತ ಒಂದೇ ಆಗಿತ್ತು!
ಅದೇನೆಂದರೆ...
ದಾಹದ ರೋಗವಾಗಿದೆ, ದುಮ್ಮಾನದ ಯೋಗವಾಗಿದೆ, ಒಂದೇ ದಿಸೆಯಲ್ಲಿ ಒಂದೇ ಗತಿಯಿಂದ ಉತ್ಕಟ ಬಯಕೆಯ ಭೋಗವಾಗಿದೆ!
ಹಾಗೂ
ಚಿಕಿತ್ಸಕರು ಹೇಳಿಕೆ ನೀಡಿದರು -
ಇವರು ಇಂತಿಷ್ಟು ಚಿಂತೆ ಮಾಡಬಾರದು! ಇನಿತಾದರೂ ತನುವಿನ ಚಿಂತೆ ಮಾಡಬೇಕಾಗಿರುವುದು! ತನುವಿಗೆ ತಕ್ಕ ವೇತನವು ಅನಿಮಾರ್ಯವಾಗಿದೆ, ಮನಸ್ಸಿಗೆ ತಕ್ಕಷ್ಟು ವಿಶ್ರಾಮವೂ!
ಕೇವಲ ದಮನದ ಪ್ರಕ್ರಿಯೆಯಿಂದ ಯಾವುದೇ ಕ್ರಿಯೆಯು ಫಲಪ್ರದವಾಗುವುದಿಲ್ಲ! ಕೇವಲ ಚೇತನ -ಚೇತನದ ಪಠಣದಿಂದ ಚಿಂತನ ಮನನದಿಂದ ಏನೂ ದೊರೆಯುವುದಿಲ್ಲ!
ಪ್ರಕೃತಿಯ ವಿರುದ್ಧ ವರ್ತಿಸುವುದು ಸಾಧನೆಯ ರೀತಿಯಾಗಿರದು! ಪ್ರೀತಿ ಇಲ್ಲದೆ ವಿರತಿಯ ಪೋಷಣೆಯು ಸಾಧನೆಯ ವಿಜಯವಲ್ಲ!
ಭೀತಿ ಇಲ್ಲದೆ ಪ್ರೀತಿ ಇಲ್ಲ ! ಈ ಸೂಕ್ತಿಯಲಿ ಇನ್ನೊಂದು ಕೊಂಡಿ ಕೂಡಿ ಕೊಂಡರೆ ಇನ್ನೂ ಸಮಯೋಚಿತವಾಗುವುದು, ಅದಾವುದೆನೆ...
ಪ್ರೀತಿ ಇಲ್ಲದೆ ರೀತಿ ಇಲ್ಲ ಹಾಗೂ.. ರೀತಿ ಇಲ್ಲದೆ ಗೀತವಿಲ್ಲ!
ತನ್ನ ಗೆಲುವಿನ -ಸಾಧಿತ ಶಾಶ್ವತ ಸತ್ಯದ, ಈ ಮಾತು ಸರಿಯಾಗಿದೆ, ಯಾವುದೆನೆ...
ಪುರುಷ ಭೋಕ್ತಾ ಆಗಿರುವನು!
ಹಾಗೂ
ಭೋಗ್ಯವಾಗಿರುವುದು ಪ್ರಕೃತಿ!
ಯಾವಾಗ ಭೋಕ್ತಾ...
(ಮುಂದುವರಿಯುವುದು)
--ಕನ್ನಡಾನುವಾದ ಪ್ರೊ. ನ್ಯಾಮಗೌಡರು!
ತಾತ್ಪರ್ಯ...!
ಒಬ್ಬರಿಗಿಂತ ಒಬ್ಬರು ಅನುಭವೀ
ವೈದ್ಯರುಗಳ ಆಗಮನವಾಯ್ತು! ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಶ್ರೇಷ್ಠಿಯನ್ನು ನಿರೀಕ್ಷಿಸಿದರು ! ಮತ್ತು ಎಲ್ಲರ ನಿರ್ಣಯವೂ ಒಂದೇ ಆಯಿತು!
ದಾಹ ರೋಗದಿಂದ ಶರೀರ ಬಾಧಿತವಾಗಿದೆ! ಮನಸ್ಸಿನಲ್ಲಿ ಯಾವುದೋ ಒಂದು ಅಪೇಕ್ಷೆ ಕಾಡುತ್ತಿದೆ! .
ಸ್ವಾಧ್ಯಾಯ, ಉಪದೇಶ, ಸತ್ಸಂಗದಿಂದ ಸಾರದ ಅಸಾರತೆ ತಿಳಿದು ಬಂದರೂ ಪಾಪಕರ್ಮದ ತೀವ್ರ ಉದಯ ಇದೆ!
ಅವರು ಇಷ್ಟೊಂದು ಚಿಂತಿಸಬಾರದು.. ತನ್ನ ಆರೋಗ್ಯದ ಕಡೆಗೂ ಗಮನ ಹರಿಸಬೇಕು! ಶರೀರಕ್ಕೆ ಅತ್ಯಾವಶ್ಯಕವಿರುವ ಆಹಾರ, ನೀರು ,ವಿಶ್ರಾಂತಿ ನೀಡಲೇ ಬೇಕು!
ಧರ್ಮ ಎಂದರೆ ದೇಹದಂಡನೆ ಮಾತ್ರ ಅಲ್ಲ! ದಮನದಿಂದ ಎಲ್ಲವೂ ಸಾಧ್ಯವಾಗುವುದಿಲ್ಲ! ಚೇತನ.. ಚೇತನ.. ಎಂದು ಉರು ಹೊಡೆದು ಫಲವಿಲ್ಲ! ಆತ್ಮ ಲೀನತೆ ಸಾಧಿಸುವುದಿಲ್ಲ... ಅದೊಂದು ಕ್ರಿಯೆ ಅಲ್ಲ.. ಸ್ಥಿತಿ!
ಶರೀರದ ಸಾಮರ್ಥ್ಯವನ್ನು ಮೀರಿ ಪ್ರಕೃತಿಯ ವಿರುದ್ಧ ದಿಕ್ಕಿನಲ್ಲಿ ಸಾಗಬಾರದು!
ಗುರಿಯ ಬಗ್ಗೆ ಆಸಕ್ತಿ ಇರದಿದ್ದರೆ ವಿರಕ್ತಿ ಉಂಟಾಗಾದು! ಅಂತ್ಯದ ಬಗ್ಗೆ ಅಂಜಿಕೆ ಇದ್ದರೆ ಧರ್ಮದ ಬಗ್ಗೆ ಪ್ರೀತಿ ಉಂಟಾಗುತ್ತದೆ!
ಭೀತಿ ಇಲ್ಲದೆ ಪ್ರೀತಿ ಇಲ್ಲ... ಈ ಸೂಕ್ತಿಯಲ್ಲಿ..
ಪ್ರೀತಿ ಇಲ್ಲದೆ ರೀತಿ ಇಲ್ಲ, ರೀತಿ ಇಲ್ಲದೆ ಗೀತವಿಲ್ಲ
ಎಂಬ ಪದ ಸಮಯಚ್ಚಯಗಳು ಸೇರಿದರೆ ಒಳ್ಳೆಯದು! ಶ್ರದ್ಧೆ ಇದ್ದಾಗ, ಸೂಕ್ತ ಸಾಧನಾ ಮಾರ್ಗದ ಆಯ್ಕೆ ನಡೆದು ಸಾಧಕ ಯಶಸ್ವಿಯಾಗುತ್ತಾನೆ!
ತಾತ್ಪರ್ಯ..!
ಇಲ್ಲಿ ಆಚಾರ್ಯರು.. ಉತ್ತಮ ಸಂದೇಶವನ್ನು.. ನೀಡಿದ್ದಾರೆ..!
ಶರೀರದ ಉಪಯೋಗ ಇರುವ ತನಕ ಅದಕ್ಕೆ ವೇತನ,ವಿಶ್ರಾಂತಿ ಅವಶ್ಯ ಕೊಡುತ್ತಿರ ಬೇಕಾಗುತ್ತದೆ! ಇಲ್ಲವಾದಲ್ಲಿ ಅದು ಪ್ರಕೃತಿಯ ವಿರೋಧವೆನಿಸುತ್ತದೆ! ಮತ್ತು ಸಾಧನೆಯ ಪದ್ಧತಿಯಲ್ಲ!
ಆತ್ಮ ತತ್ವದ ಪ್ರೀತಿಯು ಜಾಗೃತ ವಾಗದೇ, ಸಮ್ಯಗ್ದರ್ಶನ ವಿನಃ ವೈರಾಗ್ಯ ಧಾರಣೆಮಾಡುವುದು, ತಪ-ಸಾಧನಾ ಮಾಡುವುದು ಕೂಡಾ ಪಾರಮಾರ್ಥಿಕ ಸಂಘರ್ಷದ ಗೆಲುವಿನ ಕಾರಣವಲ್ಲ!
ಅಂದರೆ...
ಸಂಸಾರದ ದುಃಖಗಳಿಂದ , ಚತುರ್ಗತಿ ಭ್ರಮಣದ ಭೀತಿಯಾಗದ ವಿನಃ ನಿಜ ಆತ್ಮತತ್ವದಿಂದ, ಮೋಕ್ಷ ಮಾರ್ಗದಿಂದ ಪ್ರೀತಿಯೂ ಉಂಟಾಗಲು ಸಾಧ್ಯವಾಗದು!
ಪ್ರೀತ್ ಬಿನಾ ರಿತ ನಹೀಂ ಔರ್ ರೀತ್ ಬಿನಾ ಗೀತ್ ನಹೀಂ!!
ಈ ಸೂಕ್ತಿಯನ್ನು ಸರಿಯಾಗಿ ತಿಳಿದರೆ.. ಉತ್ತಮ ವಾದೀತು...
ಏನೆಂದರೆ...!
ಸಮೀಚೀನ ಆಸ್ತಾ, ರುಚಿ ವಿನಃ ಜ್ಞಾನವು ಸಮ್ಯಕ್ ಜ್ಞಾನವಾಗುವುದಿಲ್ಲ! ಮತ್ತು ಸಮ್ಯಕ್ ಜ್ಞಾನದ ಹೊರತು ಸರಿಯಾದ ಮಾರ್ಗ, ರೀತಿ ವಿನಃ ಸಮ್ಯಗ್ ಚಾರಿತ್ರ ರೂಪಿ ಗೀತೆಯನ್ನು ಹಾಡಲು... ಅರ್ಥಾತ್ ಧಾರಣೆ ಮಾಡಲು ಸಂಭವ ವಾಗಲಾರದು! ಮತ್ತು ಇಂತಹ ದಿಶೆಯಲ್ಲಿ ಚೇತನದ ಗೆಲುವು, ಶುದ್ಧಾತ್ಮ ತತ್ವದ ಉಪಲಬ್ಧಿಯ ಮೂಲಕ ನಿಜ ಸಿದ್ಧತ್ವದ ಆನಂದ ಸಾಧ್ಯವಾಗದು!
ಯಾವಾಗ ಭೋಕ್ತಾ..!
(ಮುಂದುವರಿಯುವುದು)
--ಭಾವಾರ್ಥ, ತಾತ್ಪರ್ಯ ಸುನೀತಾ ಉಪಾಧ್ಯೆ!
🙏🙏🙏
Comments
Post a Comment