29/05/2025 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಉಪವಾಸ ಸತ್ಯಾಗ್ರಹ.
ಪತ್ರಿಕಾ ಸುದ್ದಿಗೋಷ್ಠಿ ಮಾಡಿ 29/05/2025 ರಿಂದ ನಡೆಯುವ ಉಪವಾಸ ಸತ್ಯಾಗ್ರಹದ ಬಗ್ಗೆ ಮಾಹಿತಿ ಕೊಡಲಾಯಿತು.
ಕರ್ನಾಟಕ ಸರ್ಕಾರ ಅಲ್ಪಸಂಖ್ಯಾತರಿಗೆ ಇರುವ ಹಕ್ಕುಗಳು ಮತ್ತು ಸವಲತ್ತುಗಳು ಜೈನರಿಗೆ ಕೊಡುವುದರಲ್ಲಿ ತಾರತಮ್ಯ ಮಾಡುತ್ತಿದ್ದಾರೆ. ಈ ಬಗ್ಗೆ ಬಹಳಷ್ಟು ಸಲ ಮುಖ್ಯಮಂತ್ರಿ, ಸಚಿವರು ಮತ್ತು ಸಂಭಂದಪಟ್ಟ ಅಧಿಕಾರಿಗಳಿಗೆ ಮನವಿ ಕೊಡಲಾಗಿದೆ, ಬಹಳಷ್ಟು ಸಲ ಹೋರಾಟವು ಕೂಡಾ ಮಾಡಲಾಗಿದೆ, ಆದರೆ ಸರ್ಕಾರ ಇನ್ನು ಬೇಡಿಕೆಗಳನ್ನು ಒಪ್ಪಿಕೊಂಡು ನಿರ್ಣಯ ತೆಗೆದುಕೊಂಡಿಲ್ಲ.
ಈಗ ಅನಿವಾರ್ಯತೇಯಿಂದ 29/05/2025 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಉಪವಾಸ ಸತ್ಯಾಗ್ರಹ ಮಾಡಲಾಗಿವುದು.
7 ಮಹತ್ವದ ಬೇಡಿಕೆಗಳು.
1- ಜೈನ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ ಪ್ರತಿ ವರ್ಷ Rs.200 ಕೋಟಿ ಜೈನ ಅಭಿವೃದ್ಧಿ ನಿಗಮಕ್ಕೆ ಕೊಡಬೇಕು.
2-ಕರ್ನಾಟಕ ಸರಕಾರದ 414 ಅಲ್ಪಸಂಖ್ಯಾತರ ವಿದ್ಯಾರ್ಥಿನಿಲಯಗಳಲ್ಲಿ (314 ಹಳೆಯ+100 ಹೊಸ) ಪ್ರತಿ ಜಿಲ್ಲೆಯಲ್ಲಿ ಒಂದು ಮತ್ತು ಜೈನ ಜನಸಂಖ್ಯೆ ಹೆಚ್ಚು ಇರುವ ಜಿಲ್ಲೆಗಳಲ್ಲಿ ಮತ್ತು ಶೈಕ್ಷಣಿಕ ಕೇಂದ್ರ ಇರುವ ನಗರಗಳಲ್ಲಿ ಎರಡು ವಿದ್ಯಾರ್ಥಿನಿಲಯಗಳು ಜೈನರ ಸಲುವಾಗಿ ಇಡಬೇಕು. ಬರೀ ಸಸ್ಯಾಹಾರಿ ವಿದ್ಯಾರ್ಥಿ ನಿಲಯಗಳು ಇದ್ದಲ್ಲಿ 50% ಮೀಸಲಾತಿ ಜೈನ ವಿದ್ಯಾರ್ಥಿಗಳಿಗೆ ಇಡಬೇಕು.
3- ಇಲ್ಲಿಯವರೆಗೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ಜೈನ ಸಮಾಜಕ್ಕೆ ಸಿಕ್ಕಿಲ್ಲ ಹೀಗಾಗಿ ಅಧ್ಯಕ್ಷ ಸ್ಥಾನ ಜೈನ ಸಮಾಜಕ್ಕೆ ಕೊಡಬೇಕು ಹಾಗೂ ಇನ್ನು ನಿಗಮದಲ್ಲಿ ಜೈನ ನಿರ್ದೇಶಕರ ಆಯ್ಕೆ ಆಗಿಲ್ಲ ಹೀಗಾಗಿ ತಕ್ಷಣ ಇಬ್ಬರು ಜೈನ ನಿರ್ದೇಶಕರನ್ನು ಆಯ್ಕೆ ಮಾಡಬೇಕಾಗಿ ವಿನಂತಿ. ನಿಗಮದ ಅಧ್ಯಕ್ಷ ಸ್ಥಾನ ಎಲ್ಲಾ ಅಲ್ಪಸಂಖ್ಯಾತರ ಸಮುದಾಯಗಳಿಗೆ ಸಿಗುವ ಹಾಗೆ ನಿಯಮ ಮಾಡಬೇಕು.
4- ಇಲ್ಲಿಯವರೆಗೆ ಕರ್ನಾಟಕ ಅಲ್ಪಸಂಖ್ಯಾತರ ಆಯೋಗದಲ್ಲಿ ಅಧ್ಯಕ್ಷ ಸ್ಥಾನ ಜೈನ ಸಮಾಜಕ್ಕೆ ಸಿಕ್ಕಿಲ್ಲ, ಆಯೋಗದ ಅಧ್ಯಕ್ಷ ಸ್ಥಾನ ಜೈನ ಸಮಾಜಕ್ಕೆ ಕೊಡಬೇಕು ಮತ್ತು ಇನ್ನು ಆಯೋಗದಲ್ಲಿ ಜೈನ ಸದಸ್ಯರ ಆಯ್ಕೆ ಆಗಿಲ್ಲ ಹೀಗಾಗಿ ತಕ್ಷಣ ಜೈನ ಸದಸ್ಯರು ಆಯೋಗದ ಸದಸ್ಯರನ್ನಾಗಿ ಆಯ್ಕೆ ಮಾಡಬೇಕು ಮತ್ತು ಆಯೋಗದ ಅಧ್ಯಕ್ಷ ಸ್ಥಾನ ಎಲ್ಲಾ ಅಲ್ಪಸಂಖ್ಯಾತರ ಸಮುದಾಯಗಳಿಗೆ ಸಿಗುವ ಹಾಗೆ ನಿಯಮ ಮಾಡಬೇಕು.
5- ಅಲ್ಪಸಂಖ್ಯಾತರ ವಿಭಾಗದಲ್ಲಿ ಬರೀ 5% ಜೈನ ಸಮಾಜಕ್ಕೆ ಮೀಸಲಾತಿ ಇದೆ ಅದನ್ನು ಹೆಚ್ಚಿಸಿ 20% ಮಾಡಬೇಕು.
6- ಪ್ರಾಚೀನ ಜೈನ ಬಸದಿ ಮತ್ತು ಬಸದಿಗಳ ಆಸ್ತಿಯ ಸಂರಕ್ಷಣೆಗಾಗಿ ಕಠೋರ ಕಾನೂನು ತರಬೇಕು ಮತ್ತು ಎಲ್ಲಾ ಪ್ರಾಚೀನ ಬಸದಿ ಮತ್ತು ಆಸ್ತಿಗಳ ಸರ್ವೇ ಮಾಡಿ ಅತಿಕ್ರಮಣ ಆಗಿರುವ ಪ್ರಾಚೀನ ಬಸದಿಗಳ ಅತಿಕ್ರಮಣ ತೆಗೆಯಲು ಸರಕಾರ ವಿಶೇಷ ಕಾನೂನಿನ ವ್ಯವಸ್ಥೆ ಮಾಡಬೇಕು.
7- ರಾಜ್ಯದಲ್ಲಿ ಇರುವ ಎಲ್ಲಾ ಪ್ರಾಚೀನ ಜೈನ ಬಸದಿಗಳಲ್ಲಿ CCTV ಕ್ಯಾಮೆರಾ, ಸುರಕ್ಷಾ ಸಿಬ್ಬಂದಿಯ ನೇಮಕ ಮತ್ತು ಸೋಲಾರ ಲೈಟ ವ್ಯವಸ್ಥೆಯನ್ನು ಮಾಡಬೇಕು.
ಮಹೇಶಅಣ್ಣಾ ಕಾಸರ.
Comments
Post a Comment