ಕನಕಗಿರಿ ಶ್ರೀ ಗುರುವರನೆ
ಭುವನಕೀರ್ತಿ ಯತಿವರನೆ
ಧರ್ಮಮಾರ್ಗದಿ ಸಾಗಲು
ಸನ್ಮಾರ್ಗವನು ಕರುಣಿಪನೆ
ಅನುದಿನ ತಪವನು ಮಾಡುತಲಿ
ಯತಿಧರ್ಮ ನಿಯಮದಿ ಸಾಗುತಲಿ
ಪೂಜ್ಯಪಾದರ ಅನುರೂಪರೆನಿಸಿಹ
ಶ್ರೀ ಜಿನದರ್ಮ ಪೀಠಾಲಂಕೃತನೆ
ಉದಯದಿ ಜಿನಪೂಜೆಯ ಗೈಯುತಲಿ
ಮೋಕ್ಷಮಾರ್ಗವನು ಬೇಡುತಲಿ
ಭಕ್ತರ ಭಾವಸಂಕಲ್ಪವ ಮಾಡುತ
ಶಾಸನದೇವಿಗೆ ಅರ್ಚನೆ ಗೈದಿಹನೆ
ಭಕ್ತರ ಕಷ್ಟವ ಶಾಂತಚಿತ್ತದಿ ಆಲಿಸುತಾ
ಧರ್ಮಕರ್ಮದ ಸಮನ್ವಯ ಬೋಧಿಸುತಾ
ಸಾಂತ್ವನ ನುಡಿಯ ಬಯಸಿ ಬಂದಿಹ
ಭಕ್ತರ ಸುಖಕೆ ದಾರಿಯ ತೋರಿಪನೆ
ಜ್ಞಾನವ ಕರುಣಿಪ ಪಾರ್ಶ್ವ ಜಿನರಲಿ
ಅಭಿಷೇಕ ಪೂಜೆಯ ಗೈಯುತಲಿ
ಜಿನಧರ್ಮ ತತ್ವದ ಬೋಧಕನೆನಿಸಿಹ
ಪೂಜ್ಯಪಾದರ ಅವತಾರದಿ ನಿಂತಿಹನೆ
ಭುವನಕೀರ್ತಿ ಭಟ್ಟಾರಕ ಯತಿವರನೆ
ಕರುಣದಿ ಭಕುತರ ಕಾಯುವನೆ
ಶ್ರೀಕನಕಗಿರಿ ತಪೋಭೂಮಿಯಲಿ
ಜಿನಶಾಸನ ಸಿಂಹಾಸನಾಲಂಕೃತನೇ
ರಚನೆ: ವೀರೇಂದ್ರ ಬೇಗೂರ್ ಹಾಸನ

Comments
Post a Comment