ನಿತ್ಯಜಿನಬಿಂಬಕೆ ಅಗಣಿತ ನಮನ! ಭ. ಶ್ರೀ. ಅರಹನಾಥ ತೀರ್ಥಂಕರರಿಗೆ ಇಂದಿನ ವಿಶೇಷ ನಮನ! ಚಂದನ ಹೈ ಜಗ ವಿಖ್ಯಾತ, ತನ ಆತಪ ಹಾರೀ ! ಮನ ಕಾ ಮೇಟೋ ಸಂತಾಪ, ಭವ ವ್ಯಾಧೀ ಘೇರೀ !! ಅರಹನಾಥ ಜಿನೇಶ ಮಹಾನ, ಚರಣ ಶರಣ ಆಯಾ ! ಹೋ ಸ್ವ-ಪರ ಭೇದ ವಿಜ್ಞಾನ, ಶ್ರದ್ಧಾ ಉರ್ ಲಾಯ !! ಓಂ ಹ್ರೀಂ ಶ್ರೀಂ ಕ್ಲೀಂ ಐಂ ಅರ್ಹಂ ಶ್ರೀ ಅರಹನಾಥ ತೀರ್ಥಂಕರಾಯ ಪರಮಜಿನದೇವಾಯ ಭವತಾಪ ನಿವಾರಣಾಯ ದಿವ್ಯ ಚಂದನಂ ನಿರ್ವಪಾಮೀ ಸ್ವಾಹ !! ಅರಹನಾಥ ಆಪಕೇ ಚರಣ ಕೋ ನಿತ್ಯ ಮೈ ನಮೂಂ ! ಧರ್ ಧ್ಯಾನ್ ಆಪಕಾ ಪ್ರಭು ಭವ ಸಿಂಧು ಸೇ ತರೂಂ !! ದೇವಾಧಿದೇವ ಅರಹನಾಥ ಆಪ ಕೋ ನಮೂಂ! ಹೇ ಸಾತವೇಂ ಚಕ್ರೇಶ್ವರ ಮುನಿನಾಥ ಕೋ ನಮೂಂ !! ಮೀನ ಚಿನ್ಹ ಶೋಭಿತ ಚರಣ ಅರಹನಾಥ ಭಗವಾನ ಕೋ, ಮೈ ಪೂಜೂ ಧರ್ ಧ್ಯಾನ ! ಆಪ್ ಭಕ್ತಿ ಕೀ ಶಕ್ತೀ ಸೇ, ಕರೂಂ ಆತ್ಮ-ಕಲ್ಯಾಣ !! ಜಯ ಹೋ..! ಜಯ ಹೋ..!! ಜಯ-ಜಯ-ಜಯ ಹೋ..!!!
ಆಚಾರ್ಯ ಶ್ರೀ ವಿದ್ಯಾಸಾಗ ಮಹಾರಾಜ ವಿರಚಿತ...! ಮೂಕ-ಮಾಟಿ ಮಹಾ ಕಾವ್ಯ! ಖಂಡ-೪! ಅಗ್ನಿಯ ಪರೀಕ್ಷೆ! ಬೆಳ್ಳಿಯಂಥ ಭಸ್ಮ!! ಪು .ಸಂ. (389-390) ಪ್ರಭಾತ ಕಾಲದ ಮಾತು! ಒಬ್ಬರಿಗಿಂತೊಬ್ಬರು ಅನುಭವಿ, ಚಿಕಿತ್ಸಾ- ವಿದ್ಯಾ- ವಿಶಾರದರು ವಿಶ್ವ ವಿಖ್ಯಾತ ವೈದ್ಯರು ಶ್ರೇಷ್ಠಿಯ ಚಿಕಿತ್ಸೆಗಾಗಿ ಆಗಮಿಸಿರುವರು.......! ಸಕಲ ವೈದ್ಯರೂ ತಮ್ಮ ತಮ್ಮ ವಿಧಾನಗಳಿಂದ ಶ್ರೇಷ್ಠಿಯ ತಪಾಸಣೆ ಮಾಡಿದರು! ತಡೆ-ತಡೆದು ಅರ್ಧ ಮೂರ್ಚಿತವಾದಂತೆ ಅವಸ್ಥೆಯಾಗುತ್ತಿದೆ, ನಿದ್ರಾವಸ್ಥೆಯಲ್ಲಿರುವಂತೆ ಶರೀರದ ಚಲನವಲನವಾಗಿದೆ! ಆದರೆ ಮಾತಿನ ಚಟುವಟಿಕೆ ಮಾತ್ರ ಇಲ್ಲದಿರುವಂತಿದೆ! ಕ್ರಮವಾಗಿ ಎಲ್ಲರೂ ತಮ್ಮ ತಮ್ಮ ನಿರ್ಣಯ ತಳೆದರು .. ಎಲ್ಲರ ಅಭಿಮತ ಒಂದೇ ಆಗಿತ್ತು! ಅದೇನೆಂದರೆ... ದಾಹದ ರೋಗವಾಗಿದೆ, ದುಮ್ಮಾನದ ಯೋಗವಾಗಿದೆ, ಒಂದೇ ದಿಸೆಯಲ್ಲಿ ಒಂದೇ ಗತಿಯಿಂದ ಉತ್ಕಟ ಬಯಕೆಯ ಭೋಗವಾಗಿದೆ! ಹಾಗೂ ಚಿಕಿತ್ಸಕರು ಹೇಳಿಕೆ ನೀಡಿದರು - ಇವರು ಇಂತಿಷ್ಟು ಚಿಂತೆ ಮಾಡಬಾರದು! ಇನಿತಾದರೂ ತನುವಿನ ಚಿಂತೆ ಮಾಡಬೇಕಾಗಿರುವುದು! ತನುವಿಗೆ ತಕ್ಕ ವೇತನವು ಅನಿಮಾರ್ಯವಾಗಿದೆ, ಮನಸ್ಸಿಗೆ ತಕ್ಕಷ್ಟು ವಿಶ್ರಾಮವೂ! ಕೇವಲ ದಮನದ ಪ್ರಕ್ರಿಯೆಯಿಂದ ಯಾವುದೇ ಕ್ರಿಯೆಯು ಫಲಪ್ರದವಾಗುವುದಿಲ್ಲ! ಕೇವಲ ಚೇತನ -ಚೇತನದ ಪಠಣದಿಂದ ಚಿಂತನ ಮನನದಿಂದ ಏನೂ ದೊರೆಯುವುದಿಲ್ಲ! ಪ್ರಕೃತಿಯ ವಿರುದ್ಧ ವರ್ತಿಸುವುದು ಸಾಧನೆಯ ರೀತಿಯಾಗಿರದು! ಪ್ರೀತಿ ಇಲ್ಲದೆ ವಿರತಿಯ...